Quantcast
Channel: Mandya – Public TV – Latest Kannada News, Public TV Kannada Live, Public TV News

ತೀವ್ರ ಜಲಕ್ಷಾಮದ ನಡುವೆಯೂ ತಮಿಳುನಾಡಿಗೆ ಹರಿದ ಕಾವೇರಿ

0
0

– ಕೆಆರ್‌ಎಸ್‌ನಿಂದ 4,000 ಕ್ಯೂಸೆಕ್‌ಗೂ ಅಧಿಕ ನೀರು ಬಿಡುಗಡೆ

ಮಂಡ್ಯ: ಬೇಸಿಗೆ ಆರಂಭವಾಗಿದ್ದು, ರಾಜ್ಯದಲ್ಲೇ ತೀವ್ರ ಜಲಕ್ಷಾಮ ಎದುರಾಗಿದೆ. ಈ ನಡುವೆಯೂ ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸಿದೆ. ಕೆಆರ್‌ಎಸ್‌ ಜಲಾಶಯದಿಂದ 4,000 ಕ್ಯೂಸೆಕ್‌ಗೂ ಅಧಿಕ ಪ್ರಮಾಣದ ನೀರನ್ನು ಬಿಡುಗಡೆ ಮಾಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಬೆಂಗಳೂರಿಗೆ ಜಲಕ್ಷಾಮ ಎದಾರಾಗಿದ್ರೂ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯದಿಂದ ಶನಿವಾರ (ಮಾ.9) ಮಧ್ಯಾಹ್ನದಿಂದ ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಇದನ್ನೂ ಓದಿ: ಬಿಜೆಪಿ ಜೊತೆ ಕೈಜೋಡಿಸಿದ ಟಿಡಿಪಿ, ಜೆಎಸ್‌ಪಿ – ಆಂಧ್ರದ ಲೋಕಸಭಾ, ವಿಧಾನಸಭಾ ಚುನಾವಣೆಗೆ ಮೈತ್ರಿ ಸ್ಪರ್ಧೆ

ಸದ್ಯ ಬೆಳೆಗಳಿಗೆ ನೀರಿಲ್ಲದೇ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಬೆಂಗಳೂರಿಗೂ ಬೇಸಿಗೆಯ ಬಿಸಿ ತಟ್ಟಿದ್ದು, ಕುಡಿಯಲು ಟ್ಯಾಂಕರ್ ನೀರನ್ನು ಅವಲಂಬಿಸುತ್ತಿದ್ದಾರೆ. ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಕೇವಲ 88 ಅಡಿಗಳಷ್ಟು ಮಾತ್ರ ನೀರು ಮಾತ್ರ ಲಭ್ಯವಿದೆ. ಹೀಗಿದ್ದರೂ ಸರ್ಕಾರ ತಮಿಳುನಾಡಿಗೆ ಭಾರೀ ಪ್ರಮಾಣದ ನೀರು ಹರಿಸುತ್ತಿರುವುದು ಸಾರ್ವಜನಿಕರು ಹಾಗೂ ಪ್ರತಿಪಕ್ಷ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.

124.80 ಅಡಿಗಳಷ್ಟು ಗರಿಷ್ಠ ಸಾಮರ್ಥ್ಯ ಹೊಂದಿರುವ ಕೆಆರ್‌ಎಸ್ ಜಲಾಶಯದಲ್ಲಿ 89.46 ಅಡಿಗಳಷ್ಟು ಮಾತ್ರವೇ ನೀರನ್ನು ಒಳಗೊಂಡಿದೆ. ತಮಿಳುನಾಡಿಗೆ ನೀರು ಹರಿಸಿದ್ರೆ, 70 ಅಡಿಗಳಿಗೆ ನೀರಿನ ಮಟ್ಟ ಕುಸಿಯುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಕೆಆರ್‌ಎಸ್ ಡ್ಯಾಮ್ ನೀರಿನ ಮಟ್ಟ
ಗರಿಷ್ಠ ಮಟ್ಟ : 124.80 ಅಡಿ
ಇಂದಿನ ಮಟ್ಟ: 89.46 ಅಡಿ
ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ
ಇಂದಿನ ಸಂಗ್ರಹ : 15.619 ಟಿಎಂಸಿ


ಮಂಡ್ಯ ವಿಸಿ ನಾಲೆಗೆ ಕಾರು ಬಿದ್ದು ಓರ್ವ ಸಾವು

0
0

ಮಂಡ್ಯ: ತಡೆಗೋಡೆ ಇಲ್ಲದ ಕಾರಣ ಮಂಡ್ಯದ (Mandya) ವಿಸಿ ನಾಲೆಯಲ್ಲಿ ಮತ್ತೊಂದು ದುರಂತ ಜರುಗಿದ್ದು, ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.

ಮಂಡ್ಯದ ಅವ್ವೇರಹಳ್ಳಿ ಗ್ರಾಮದ ಬಳಿ ಈ ದುರ್ಘಟನೆ ಜರುಗಿದೆ. ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ನಾಲೆಗೆ ಶಿಫ್ಟ್ ಕಾರು (Swift Car) ಉರುಳಿದೆ. ಇದರಿಂದ ಕಾರು ಸಂಪೂರ್ಣ ಜಖಂ ಆಗಿದೆ. ಈ ಪರಿಣಾಮ ಕಾರಿನಲ್ಲಿದ್ದ ಇಬ್ಬರ ಪೈಕಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ. ಮೃತ ಹಾಗೂ ಗಾಯಗೊಂಡ ವ್ಯಕ್ತಿಯ ವಿಳಾಸ ಇನ್ನೂ ತಿಳಿದು ಬಂದಿಲ್ಲ.

ಗಾಯಗೊಂಡ ವ್ಯಕ್ತಿಯನ್ನು ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ. ವಿಸಿ ನಾಲೆಯ‌ ಹಲವು ಕಡೆ ತಡೆಗೋಡೆ ಇಲ್ಲದ ಕಾರಣ ಇಂತಹ ಘಟನೆಗಳು ಪದೇ ಪದೇ ಜರುಗುತ್ತಿದ್ದು, ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಿದ್ದರೂ ಸಹ ಜಿಲ್ಲಾಡಳಿತ ಈ ಬಗ್ಗೆ ಹೆಚ್ಚು ಗಮನವರಿಸುತ್ತಿಲ್ಲ. ಇದನ್ನೂ ಓದಿ: ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಮಗಳನ್ನೂ ಎಳೆದಾಡಿದ್ರು!

ಮಂಡ್ಯದಿಂದ ಮತ್ತೆ ನಿಖಿಲ್‌ ಸ್ಪರ್ಧೆ? –ಮಾರ್ಚ್‌ 25ಕ್ಕೆ ಘೋಷಣೆ ಸಾಧ್ಯತೆ

0
0

ಮಂಡ್ಯ: ಮತ್ತೆ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಮೈತ್ರಿ ಅಭ್ಯರ್ಥಿಯಾಗಿ ಮಂಡ್ಯದಲ್ಲಿ (Mandya) ಕಣಕ್ಕೆ ಇಳಿಯುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

ಮಂಡ್ಯ ಜೆಡಿಎಸ್‍ನ (JDS) ಲೋಕಸಭಾ ಚುನಾವಣೆ (Lok Sabha Election) ಪೂರ್ವಭಾವಿ ಸಭೆಯಲ್ಲಿ ಹಲವು ನಾಯಕರು, ಕಾರ್ಯಕರ್ತರು ಕುಮಾರಸ್ವಾಮಿ ಅಥವಾ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆ ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು.

ನಾಯಕರ ಮನವಿಗೆ ಸ್ಪಂದಿಸಿದ ಕುಮಾರಸ್ವಾಮಿ, ನಿಮ್ಮ ಆಸೆಗೆ ನಾವು ಭಂಗ ತರುವುದಿಲ್ಲ. ನಿಖಿಲ್ ಕುಮಾರಸ್ವಾಮಿಯಲ್ಲಿ ಒಂದು ಮಾತು ಹೇಳುತ್ತೇನೆ. ನಿಮ್ಮ ಭಾವನೆಗಳಿಗೆ ಯಾವುದೇ ಕಾರಣಕ್ಕೂ ನಿರಾಸೆಯಾಗಲ್ಲ. ನಿಮ್ಮ ಆಸೆಯ ಪ್ರಕಾರ ಅದನ್ನು ನೇರವೇರಿಸಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಮಾರ್ಚ್‌ 24ಕ್ಕೆ ನನಗೆ ಅಪರೇಷನ್ ಇದೆ. ಮಾರ್ಚ್‌ 25ಕ್ಕೆ ಬಂದು ನಾನು ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡುತ್ತೇನೆ. ನಿಖಿಲ್ ಒಪ್ಪಿಸಲು ನಾನು ಮುಂದಾಗುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.  ಇದನ್ನೂ ಓದಿ: ನಾಗಸಾಧು ಭೇಟಿ ಮಾಡಿ ಪ್ರಚಾರ ಆರಂಭ ಮಾಡಿದ ಶ್ರೀರಾಮುಲು

 

ಈ ಹಿಂದೆ ನಿಖಿಲ್‌ ಕುಮಾರಸ್ವಾಮಿ ಈ ಬಾರಿಯ ಚುನಾವಣೆಗೆ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಅಭಿಮಾನಿಗಳು, ನಾಯಕರು ನಿಖಿಲ್‌ ಸ್ಪರ್ಧೆಯ ಬಗ್ಗೆ ಒಲವು ವ್ಯಕ್ತಪಡಿಸುತ್ತಿರುವ ಕಾರಣ ಈಗ ಅವರ ನಿಲುವು ಏನು ಎನ್ನುವುದು ಸದ್ಯದ ಕುತೂಹಲ.

ಸುಮಲತಾ ಅಕ್ಕ ಇದ್ದಂತೆ, ಸಂಘರ್ಷ ಮುಂದುವರಿಸಲ್ಲ: ಹೆಚ್‌ಡಿಕೆ

0
0

ಮಂಡ್ಯ: ಸುಮಲತಾ ಅಂಬರೀಶ್ (Sumalatha Ambareesh) ಅವರು ನಮ್ಮ ಅಕ್ಕ ಇದ್ದಂತೆ. ರಾಜಕೀಯದಲ್ಲಿ ಆಗ ಏನೋ ಆಗಿತ್ತು. ಈಗ ನಾವು ಸಂಘರ್ಷ ಮುಂದುವರಿಸಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

ಮಂಡ್ಯ (Mandya) ಲೋಕಸಭಾ ಚುನಾವಣೆ (Lok Sabha Election) ಸಂಬಂಧ ಜೆಡಿಎಸ್ (JDS) ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ವಿಷಯದಲ್ಲಿ ಒಂದು ಮಾತು ಹೇಳುತ್ತೇನೆ. ಅಂಬರೀಶ್, ನಾವೆಲ್ಲ ಒಟ್ಟಾಗಿ, ಪ್ರೀತಿಯಿಂದ ಬೆಳೆದವರು. ನಮ್ಮ ಪಕ್ಷದಿಂದಲೇ ಅಂಬರೀಶ್ ಪಾರ್ಲಿಮೆಂಟ್ ಪ್ರವೇಶ ಮಾಡಿದ್ದರು. ನಾನು ಸಿಎಂ ಆಗಿದ್ದಾಗಲೇ ರಾಜ್‌ಕುಮಾರ್ ಹಾಗೂ ಅಂಬರೀಶ್ ನಿಧನರಾದರು. ರಾಜ್ ಸಮಾಧಿ ಮಾಡಿದ್ದು ನಾನೇ. ಅಂಬರೀಶ್ ಸಮಾಧಿಗೂ ಜಾಗ ಗುರುತಿಸಿ ಗೌರವ ಕೊಟ್ಟೆ. ವಿಷ್ಣುವರ್ಧನ್ ಸಮಾಧಿ ಸ್ಮಾರಕ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದರು. ಇದನ್ನೂ ಓದಿ: ಹೃದಯಾಘಾತದಿಂದ ಸಾವು ತಡೆಗೆ ಸಿಗಲಿದೆ ಇಂಜಕ್ಷನ್: ಪುನೀತ್‌ ಹೆಸರಲ್ಲಿ ʻಹೃದಯ ಜ್ಯೋತಿʼ ಯೋಜನೆ ಜಾರಿ!

ಅಂಬರೀಶ್ ನನ್ನ ಆತ್ಮೀಯ ಸ್ನೇಹಿತ. ಆತನಿಗೆ ನಮನ ಸಲ್ಲಿಸಬೇಕಾಗಿದ್ದು ನನ್ನ ಕರ್ತವ್ಯ. ಅಂಬರೀಶ್ ಬಡ ಕುಟುಂಬದಿಂದ ಸಿನಿಮಾರಂಗದಲ್ಲಿ ಸಾಧನೆ ಮಾಡಿದ ನಮ್ಮ ಸಮಾಜದ ವ್ಯಕ್ತಿ. ಅಂಬರೀಶ್‌ಗೆ ಗೌರವ ನೀಡುವ ಮೂಲಕ ಮಂಡ್ಯ ಜನರಿಗೂ ಗೌರವ ನೀಡಿದ್ದೇವೆ. 2019, 2023ರ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಜನತೆ ನಮಗೆ ಅನ್ಯಾಯ ಮಾಡಲಿಲ್ಲ. ಮಂಡ್ಯ ಜಿಲ್ಲೆಯ ಮತದಾರ ಬಂಧುಗಳೇ ನಮ್ಮ ತಂದೆ-ತಾಯಿಯಂದಿರು. ರಾಜಕೀಯವಾಗಿ ನಮ್ಮಿಂದ ಸಣ್ಣಪುಟ್ಟ ತಪ್ಪುಗಳಾಗಿರಬಹುದು. ಈ ಜಿಲ್ಲೆಯ ಜನತೆಗೆ ಸ್ಪಷ್ಟ ಮನವಿ ಮಾಡಲು ಬಯಸುತ್ತೇವೆ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ನಾವು ಸಿದ್ಧರಿದ್ದೇವೆ. ತಪ್ಪು ತಿದ್ದಿಕೊಳ್ಳಲು ಈ ಚುನಾವಣೆಯಲ್ಲಿ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಮಂಡ್ಯದಿಂದ ಮತ್ತೆ ನಿಖಿಲ್‌ ಸ್ಪರ್ಧೆ? – ಮಾರ್ಚ್‌ 25ಕ್ಕೆ ಘೋಷಣೆ ಸಾಧ್ಯತೆ

 

ಮಂಡ್ಯ ಜಿಲ್ಲೆಯ ಜನರ ಜೊತೆ ಮೊದಲಿಂದಲೂ ನಾನು ಇದ್ದೇನೆ. 2019ರಲ್ಲಿ ಹೊಂದಾಣಿಕೆ ಎಂದು ಕುತ್ತಿಗೆ ಕೊಯ್ದರು. ಅದಕ್ಕೆ ಉತ್ತರ ಕೊಡುವ ಶಕ್ತಿ ಮಂಡ್ಯ ಜನರ ಕೈಯಲ್ಲಿ ಇದೆ. ನನ್ನ ಜನ್ಮ ಭೂಮಿ ಹಾಸನ. ರಾಜಕೀಯ ಭವಿಷ್ಯ ನೀಡಿದ್ದು ರಾಮನಗರ. ನನ್ನ ಜೀವ ಮಿಡಿಯುವುದು ಮಂಡ್ಯಗಾಗಿ. ಸ್ವಾಭಿಮಾನ ಎನ್ನುವುದು ಮಾತಿನಲ್ಲಿ ಅಲ್ಲ, ಕೆಲಸದಲ್ಲಿ ಇದೆ. ನಾಟಿ ಸ್ಟೈಲ್ ರಾಜಕೀಯ ಅಂತಾರೆ ಕೆಲವರು. ದುಡ್ಡಿನಿಂದ ರಾಜಕೀಯ ಮಾಡೋದು ಅಲ್ಲ. ಕೆಲವರಿಗೆ ಈ ಚುನಾವಣೆ ಕಲೆಕ್ಷನ್ ಮಾಡಿಕೊಳ್ಳಲು ಒಳ್ಳೆಯ ಅವಕಾಶ ಎಂದು ಕಿಡಿಕಾರಿದರು. ಇದನ್ನೂ ಓದಿ: ಮೈಸೂರು ಕಾಂಗ್ರೆಸ್ ಅಭ್ಯರ್ಥಿ ಇಂದೇ ಅಂತಿಮ? – ಯದುವೀರ್ ವಿರುದ್ಧ ಯಾರು ಕಣಕ್ಕೆ?

 

21ಕ್ಕೆ ನನಗೆ ಆಪರೇಷನ್ ಇದೆ. ನನಗೆ 84 ವರ್ಷ ಆಯಸ್ಸು ಎಂದು ಜ್ಯೋತಿಷಿಗಳು ಹೇಳಿದ್ದಾರೆ. ದೇವೇಗೌಡರು ಜ್ಯೋತಿಷಿಗಳ ಮಾತು ಕೇಳಿ ಬದುಕಿದ್ದಾರೆ. ಈ ಜೀವ ಭೂಮಿಗೆ ಇಷ್ಟು ಬೇಗ ಹೋಗಲ್ಲ. ಜನರು ಸರ್ಟಿಫಿಕೇಟ್ ನೀಡಿದ ಮೇಲೆ ಈ ಜೀವ ಭೂಮಿಗೆ ಹೋಗೋದು. ಜನರ ಋಣ ತೀರಿಸಿದ ಮೇಲೆ ನಾನು ಭೂಮಿಗೆ ಹೋಗೋದು. ಅಲ್ಲಿಯವರೆಗೆ ನಾನು ಭೂಮಿಗೆ ಹೋಗಲ್ಲ. ನಾನು ರಾಜಕೀಯಕ್ಕೆ ಬರಬೇಕು ಎಂದುಕೊಂಡವನಲ್ಲ. ಸಿನಿಮಾ ಹಂಚಿಕೆದಾರನಾಗಿ ನಾನು ಕೆಲಸ ಮಾಡುತ್ತಿದ್ದೆ. ಆಕಸ್ಮಿಕವಾಗಿ ನಾನು ರಾಜಕೀಯಕ್ಕೆ ಬಂದಿದ್ದು ಎಂದರು. ಇದನ್ನೂ ಓದಿ: ನಾಗಸಾಧು ಭೇಟಿ ಮಾಡಿ ಪ್ರಚಾರ ಆರಂಭ ಮಾಡಿದ ಶ್ರೀರಾಮುಲು

ಡಾ.ಮಂಜುನಾಥ್ ಅವರನ್ನು ಸ್ಪರ್ಧೆ ಮಾಡುವಂತೆ ನಾನು ಹೇಳಿಲ್ಲ. ಅವರು ಸಹ ಬಯಸಿರಲಿಲ್ಲ. ಜನರ ಒತ್ತಾಯದ ಮೇರೆಗೆ ಅವರು ರಾಜಕೀಯಕ್ಕೆ ಬಂದಿದ್ದಾರೆ. ಈಗ ಕಾಂಗ್ರೆಸ್ ಅವರು ದೇವೇಗೌಡರ ಕುಟುಂಬದ ಗುಲಾಮರಾಗೋದು ಬೇಡಾ ಎಂದು ಹೇಳುತ್ತಾರೆ. ನಾವು ರಾಮನಗರ ಜನರನ್ನು ಗುಲಾಮರನ್ನಾಗಿ ಮಾಡಿಕೊಂಡಿಲ್ಲ. ನಾವು ಅವರ ಸೇವಕರಾಗಿದ್ದೇವೆ. ರಾಮನಗರ ಜನರನ್ನು ಗುಲಾಮರನ್ನಾಗಿ ಕಾಣೋದು ಕಾಂಗ್ರೆಸ್‌ನವರು. ಮಾವನನ್ನೇ ಯಾಮಾರಿಸಿದ ಚತುರ ಅಳಿಯಾ ಅಂತಾರೆ ಆ ಮಹಾನುಭಾವ. ಪಾಪ ಡಾ.ಮಂಜುನಾಥ್ ಎಷ್ಟೋ ಜನರ ಪ್ರಾಣ ಉಳಿಸಿದ್ದಾರೆ. ಅಂತಹವರಿಗೆ ಲಘುವಾಗಿ ಇವರು ಮಾತನಾಡುತ್ತಿದ್ದಾರೆ. ಇವರು ಕಮಿಷನ್ ಪಡೆದು ರಾಜಕೀಯ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಸಂಸದ ಸಂಗಣ್ಣ ಕರಡಿ ಕಣ್ಣೀರು

ಮೈಸೂರು ಬಿಜೆಪಿ ಅಭ್ಯರ್ಥಿ ಯದುವೀರ್ ಟೆಂಪಲ್ ರನ್

0
0

– ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ರಾಜವಂಶಸ್ಥ

ಮಂಡ್ಯ: ಮೈಸೂರು-ಕೊಡಗು (Mysuru-Kodagu Lok Sabha) ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Wadiyar) ಟೆಂಪಲ್ ರನ್ ಮಾಡುತ್ತಿದ್ದಾರೆ. ಶ್ರೀಕ್ಷೇತ್ರ ಆದಿಚುಂಚನಗಿರಿ ಯದುವೀರ್ ಭೇಟಿ ನೀಡಿದ್ದಾರೆ.

ಶ್ರೀ ಕ್ಷೇತ್ರದ ಕಾಲಭೈರವೇಶ್ವರ ಸ್ವಾಮಿ (Kalabhairaveshwara Swami Adichunchanagiri Temple) ದರ್ಶನ ಪಡೆದು ಯದುವೀರ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಯದುವೀರ್ ಆಗಮನದ ವೇಳೆ ಪೀಠಾಧಿಪತಿ ಶ್ರೀ ನಿರ್ಮಲಾನಂದ ಸ್ವಾಮೀಜಿ (Nirmalananda Swamiji) ವಿಶೇಷ ಪೂಜಾ ಕೈಂಕರ್ಯ ನಡೆಸಿದರು. ಇದನ್ನೂ ಓದಿ: ಯದುವೀರ್ ವಿರುದ್ಧ ತುಟಿ ಬಿಚ್ಚಬೇಡಿ: ‘ಕೈ’ ನಾಯಕರಿಗೆ ಸಿಎಂ ಎಚ್ಚರಿಕೆ

ಯದುವೀರ್ ದೇವಾಲಯಕ್ಕೆ ಆಗಮಿಸುತ್ತಿದ್ದಂತೆ ಯದುವೀರ್‌ಗೆ ದೇಗುಲದಿಂದ ಪೂರ್ಣಕುಂಭ ಸ್ವಾಗತ ಕೋರಲಾಯಿತು. ದೇವರ ದರ್ಶನದ ಬಳಿಕ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಜೊತೆ ಮಾತುಕತೆ ನಡೆಸಿದರು.

ಅಲ್ಲದೇ, ಆದಿಚುಂಚನಗಿರಿಗೆ ತುಮಕೂರು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ (V.Somanna) ಕೂಡ ಭೇಟಿ ನೀಡಿ ಕಾಲಭೈರವೇಶ್ವರನ ದರ್ಶನ ಪಡೆದರು. ಬಾಲಗಂಗಾಧರನಾಥ ಸ್ವಾಮೀಜಿಯವರ ಗದ್ದುಗೆಗೆ ಪುಷ್ಪ ನಮನ ಸಲ್ಲಿಸಿದರು. ಇದನ್ನೂ ಓದಿ: ಮೈಸೂರಿನಿಂದ ಲಕ್ಷ್ಮಣ್‌, ಚಾಮರಾಜನಗರದಿಂದ ಹೆಚ್.ಸಿ.ಮಹದೇವಪ್ಪ ಪುತ್ರನಿಗೆ ʼಕೈʼ ಟಿಕೆಟ್ ಫೈನಲ್?

ದೇವರ ದರ್ಶನದ ಬಳಿಕ ಶ್ರೀಕ್ಷೇತ್ರದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದು ಕೆಲಹೊತ್ತು ಮಾತುಕತೆ ನಡೆಸಿದರು. ವಿ.ಸೋಮಣ್ಣಗೆ ಮಾಜಿ ಸಚಿವ ಕೆ.ಗೋಪಾಲಯ್ಯ, ಶಾಸಕ ಸುರೇಶಗೌಡ ಸಾಥ್ ನೀಡಿದರು.

ಬುಲಾವ್ ಬೆನ್ನಲ್ಲೇ ದಿಢೀರ್ ದೆಹಲಿಗೆ ತೆರಳಿದ ಸಂಸದೆ ಸುಮಲತಾ

0
0

ಮಂಡ್ಯ: ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಅವರನ್ನು ಶನಿವಾರ ಭೇಟಿಯಾದ ಬೆನ್ನಲ್ಲಿಯೇ ಇಂದು ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ದೆಹಲಿಗೆ ತೆರಳಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಜೆಡಿಎಸ್‍ಗೆ (JDS) ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡುವುದು ಫಿಕ್ಸ್ ಆಗಿದೆ ಎನ್ನಲಾಗುತ್ತಿದೆ. ಹೀಗಾಗಿ ಮಂಡ್ಯದಲ್ಲಿ ಸ್ಪರ್ಧೆಗೆ ದಳಪತಿಗಳ ಸಿದ್ಧತೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಸುಮಲತಾಗೆ ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿದೆ.

ಕೂಡಲೇ ದೆಹಲಿಗೆ ಬರಬೇಕೆಂದು ಹೈಕಮಾಂಡ್ ಸೂಚನೆ ನೀಡಿದ ಬೆನ್ನಲ್ಲಿಯೇ ಇಂದು ಮಧ್ಯಾಹ್ನವೇ ಸುಮಲತಾ ಅವರು ರಾಷ್ಟ್ರರಾಜಧಾನಿಗೆ ಹೋಗಿದ್ದಾರೆ. ಕೆಲವೇ ಕ್ಷಣಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (AmitShah) ಹಾಗೂ ಜೆಪಿ ನಡ್ಡಾ (JP Nadda) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ಒಂದು ವೇಳೆ ಮಂಡ್ಯ ಟಿಕೆಟ್ ಕೈ ತಪ್ಪಿದ್ರೆ ಸುಮಲತಾ ನಡೆಯೇನು..?, ಪಕ್ಷೇತರರಾಗಿ ಸ್ಪರ್ಧಿಸ್ತಾರಾ…? ಕಣದಿಂದ ಸರಿಯುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ಒಟ್ಟಿನಲ್ಲಿ ಸುಮಲತಾ ಅವರ ಮುಂದಿನ ನಡೆ ತೀವ್ರ ಕುತೂಹಲ ಹುಟ್ಟಿಸಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ ಟಿಕೆಟ್ ಫೈಟ್- ಹೊರಗಿನವರಿಗೆ ಟಿಕೆಟ್ ಬೇಡವೆಂದ್ರು ವಿಶ್ವನಾಥ್

Mandya Lok Sabha 2024: ಸಕ್ಕರೆ ನಾಡಿನ ಜನ ಸಿಹಿ ತಿನ್ನಿಸೋದು ಯಾರಿಗೆ?

0
0

– ‘ಕೈ’ ವಿರುದ್ಧ ತೊಡೆ ತಟ್ಟುವ ಮೈತ್ರಿ ಅಭ್ಯರ್ಥಿ ಯಾರು?
– ಹೆಚ್‌ಡಿಕೆ, ನಿಖಿಲ್, ಪುಟ್ಟರಾಜು, ಸುಮಲತಾ – ಯಾರಿಗೆ ಟಿಕೆಟ್?

ಕರ್ನಾಟಕದ ಸಕ್ಕರೆ ನಾಡು ಮಂಡ್ಯ (Mandya). ಒಕ್ಕಲಿಗರ ಪ್ರಾಬಲ್ಯವಿರುವ ಹಾಗೂ ಹಳೆ ಮೈಸೂರು ಭಾಗವಾಗಿದ್ದ ಪ್ರದೇಶ. ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಪ್ರತಿ ಬಾರಿಯೂ ವಿಭಿನ್ನವಾಗಿರುತ್ತದೆ. ಇಲ್ಲಿನ ಮತದಾರರು ಚುನಾವಣೆಯಲ್ಲಿ (Elections) ಒಂದೊಂದು ಅಂಶಗಳನ್ನು ಇಟ್ಟುಕೊಂಡು ತಮ್ಮ ಮತಗಳನ್ನು ಅಭ್ಯರ್ಥಿಗಳಿಗೆ ಹಾಕುತ್ತಾರೆ. ಕಳೆದ ಲೋಕಸಭಾ ಚುನಾವಣೆ ಇದಕ್ಕಾ ತಾಜಾ ಉದಾಹರಣೆಯಾಗಿದೆ. 2019ರ ಲೋಕಸಭಾ ಚುನಾವಣೆ (2019 Lok Sabha Elections) ವೇಳೆ ಇಡೀ ರಾಷ್ಟ್ರ ರಾಜಕೀಯದಲ್ಲಿ ಮಂಡ್ಯ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿದ್ದವು (Congress JDS Alliance). ಒಂದು ಕಡೆ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದರು. ಎದುರಾಳಿಯಾಗಿ ಇಂದಿನ ಸಂಸದೆ ಸುಮಲತಾ ಅಂಬರೀಶ್ ಕಣಕ್ಕೆ ಇಳಿದಿದ್ದರು. ಇತ್ತ ಬಿಜೆಪಿ ಅಭ್ಯರ್ಥಿಯನ್ನು ಹಾಕದೆ ಸುಮಲತಾ (Sumalatha) ಅವರಿಗೆ ಬೆಂಬಲ ಸೂಚಿಸಿತ್ತು. ಒಂದು ಕಡೆ ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಅಸ್ತಿತ್ವ ಹೊಂದಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ, ಇನ್ನೊಂದೆಡೆ ಆಗ ತಾನೇ ಅಗಲಿದ್ದ ರೆಬಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾ ಅವರಿಗೆ ಇದ್ದ ಅನುಕಂಪ. ಇಬ್ಬರಲ್ಲಿ ಯಾರಿಗೆ ಮತ ಹಾಕೋದು ಎಂಬ ಗೊಂದಲದಲ್ಲಿ ಆರಂಭದಲ್ಲಿ ಮಂಡ್ಯ ಮತದಾರರು ಇದ್ದರು. ಚುನಾವಣೆ ಕಾವು ಏರುತ್ತಿದ್ದಂತೆ ಜೆಡಿಎಸ್ ನಾಯಕರ ಕೆಲ ಮಾತುಗಳು ಹಾಗೂ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ನಾಯಕರು ಮೈತ್ರಿಗೆ ಕೈ ಕೊಟ್ಟಿದ್ದು, ಸುಮಲತಾ ಅಂಬರೀಶ್ ಅವರಿಗೆ ಬ್ರಹ್ಮಾಸ್ತ್ರವಾಗಿತ್ತು.

ಕ್ಷೇತ್ರ ಪರಿಚಯ:
ಕಾವೇರಿ, ಹೇಮಾವತಿ, ಲೋಕಪಾವನಿ, ಲಕ್ಷ್ಮಣತೀರ್ಥ, ಶಿಂಷಾ ಪಂಚನದಿಗಳ ಬೀಡು ಮಂಡ್ಯ. ರಾಷ್ಟ್ರ ರಾಜಕೀಯದಲ್ಲಿ ಮಂಡ್ಯಕ್ಕೆ ವಿಶೇಷ ಸ್ಥಾನವಿದೆ. ಕೃಷಿ ಪ್ರಧಾನ ಜಿಲ್ಲೆಯೂ ಹೌದು. ಅಪ್ಪಟ ಕನ್ನಡಿಗರು ಇರುವ ನೆಲವಿದು. 1952 ರಿಂದಲೂ ಮಂಡ್ಯ ಕ್ಷೇತ್ರ ಲೋಕಸಭಾ ಚುನಾವಣೆಗೆ ಸಾಕ್ಷಿಯಾಗಿದೆ. 2008 ರಲ್ಲಿ ಕ್ಷೇತ್ರ ಮರುವಿಂಗಡಣೆಯಾಯಿತು. ಆರಂಭದಲ್ಲಿ ಕಾಂಗ್ರೆಸ್ ಹಿಡಿತದಲ್ಲಿದ್ದ ಮಂಡ್ಯ ನಂತರ ಜೆಡಿಎಸ್ ತೆಕ್ಕೆಗೆ ಬಂತು. ಕಾಂಗ್ರೆಸ್ ಪ್ರಭಾವ ಸ್ವಲ್ಪ ಮಟ್ಟಿಗೆ ಕುಗ್ಗಿದೆ. ಆದರೂ ಎರಡೂ ಪಕ್ಷಗಳಿಗೆ ಇದು ಜಿದ್ದಾಜಿದ್ದಿನ ಕಣ.

ವಿಧಾನಸಭಾ ಕ್ಷೇತ್ರಗಳೆಷ್ಟು?
ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ 8 ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ. ಮಂಡ್ಯ, ಮಳವಳ್ಳಿ, ಮದ್ದೂರು, ಮೇಲುಕೋಟೆ, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್.ಪೇಟೆ, ಕೆ.ಆರ್.ನಗರ. ಇದನ್ನೂ ಓದಿ: Koppal Lok Sabha 2024: ಹನುಮನ ಕೃಪ ಕಟಾಕ್ಷ ಯಾರ ಮೇಲೆ?

ಮತದಾರರ ಸಂಖ್ಯೆಯೆಷ್ಟು?
ಮಂಡ್ಯ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 17,68,688 ಇದೆ. ಈ ಪೈಕಿ ಪುರುಷರು 8,71,490 ಹಾಗೂ ಮಹಿಳೆಯರು 8,97,031 ಮತದಾರರು ಇದ್ದಾರೆ. ಇದನ್ನೂ ಓದಿ: ಕೃಷಿ ವಲಯಕ್ಕೂ ಬಂತು AI – ಬೆಳೆಗಳಿಗೆ ತಗುಲುವ ರೋಗದ ಬಗ್ಗೆ ಮೊದಲೇ ಎಚ್ಚರಿಸುತ್ತೆ IOT

ಕಳೆದ ಚುನಾವಣೆಯಲ್ಲಿ ಏನಾಗಿತ್ತು?
2019 ರ ಮಂಡ್ಯ ಲೋಕಸಭಾ ಚುನಾವಣೆಯು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹಾಗೂ ಸ್ವತಂತ್ರ ಅಭ್ಯರ್ಥಿ ನಡುವಿನ ಜಿದ್ದಾಜಿದ್ದಿಗೆ ಕಾರಣವಾಗಿತ್ತು. ಅಂತಿಮವಾಗಿ 13,79,210 ಮತಗಳು ಆ ಚುನಾವಣೆಯಲ್ಲಿ ಚಲಾವಣೆಯಾದವು. ಇದರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸಂಸದೆ ಸುಮಲತಾ ಅಂಬರೀಶ್‌ಗೆ 7,03,660 ಮತಗಳು ಬಿದ್ದರೆ, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು 5,77,784 ಮತಗಳನ್ನು ಪಡೆದರು. ಅಂತಿಮವಾಗಿ ಸುಮಲತಾ ಅಂಬರೀಶ್ 1,25,876 ಮತಗಳ ಅಂತರದಲ್ಲಿ ಭರ್ಜರಿ ಗೆಲವು ಸಾಧಿಸಿದ್ದರು.

ವಿಧಾನಸಭಾ ಕ್ಷೇತ್ರಗಳ ಪರಿಸ್ಥಿತಿ ಹೇಗಿದೆ?
ಮಂಡ್ಯ ಲೋಕಸಭಾ ಚುನಾವಣೆಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ 6 ಶಾಸಕರಿದ್ದು, ಒಂದು ಕ್ಷೇತ್ರ ಕಾಂಗ್ರೆಸ್ ಬೆಂಬಲ ನೀಡಿದ್ದ ರೈತ ಸಂಘದ ಶಾಸಕರಿದ್ದಾರೆ. ಒಂದು ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್ ಶಾಸಕ ಇದ್ದಾರೆ. (ಕಾಂಗ್ರೆಸ್ – ಮಂಡ್ಯ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್.ನಗರ ಹಾಗೂ ಜೆಡಿಎಸ್ – ಕೆ.ಆರ್.ಪೇಟೆ, ರೈತ ಸಂಘ – ಮೇಲುಕೋಟೆ). ಇದನ್ನೂ ಓದಿ: ರಾಜಕೀಯ ಪಕ್ಷಕ್ಕಾಗಿ ನೀವೂ ನ್ಯಾಯಾಲಯದಲ್ಲಿಲ್ಲ, ಮಾ.21ರ ಒಳಗಡೆ ಎಲ್ಲ ದಾಖಲೆ ಬಿಡುಗಡೆಗೆ ಸೂಚನೆ – ಎಸ್‌ಬಿಐ ವಿರುದ್ಧ ಸುಪ್ರೀಂ ಕೆಂಡ

ಕಾಂಗ್ರೆಸ್ ವರ್ಸಸ್ ಜೆಡಿಎಸ್
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಹೆಚ್ಚಿನ ವರ್ಚಸ್ಸು ಪಡೆದಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ 8 ಶಾಸಕರನ್ನು ಇಟ್ಟುಕೊಂಡು ಚುನಾವಣೆ ಎದುರಿಸಿ ಸೋಲು ಕಂಡಿತ್ತು. ಈ ಬಾರಿ ಕಾಂಗ್ರೆಸ್ 6 ಶಾಸಕರು ಮತ್ತು ಓರ್ವ ಬೆಂಬಲಿತ ಶಾಸಕನನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಸೋಲು ಅನುಭವಿಸಿದರೂ ಮಂಡ್ಯ ಜಿಲ್ಲೆಯಲ್ಲಿ ತನ್ನ ಹಳೆಯ ವರ್ಚಸ್ಸನ್ನು ಕಳೆದುಕೊಂಡಿಲ್ಲ. ಇತ್ತ ಕಾಂಗ್ರೆಸ್ ತನ್ನ ಹಳೆಯ ಲಯವನ್ನು ಜಿಲ್ಲೆಯಲ್ಲಿ ಹುಟ್ಟು ಹಾಕುತ್ತಾ ಇದೆ.

ಮೈತ್ರಿ ಅಭ್ಯರ್ಥಿಯಾಗಿ ಯಾರು ಸ್ಪರ್ಧೆ?
ಸದ್ಯ ಈ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಪಕ್ಷಗಳು ಮೈತ್ರಿಯಾಗಿ ಚುನಾವಣೆ ಎದುರಿಸುತ್ತಿವೆ. ಇವರಿಬ್ಬರಲ್ಲಿ ಇನ್ನೂ ಯಾರಿಗೆ ಮಂಡ್ಯ ಕ್ಷೇತ್ರ ಎಂದು ನಿರ್ಧಾರವಾಗಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‌ಗೆ ಹೆಚ್ಚಿನ ವರ್ಚಸ್ಸು ಇರುವ ಕಾರಣ ಬಹುತೇಕ ಬಿಜೆಪಿ ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಸಾಧ್ಯತೆ ಇದೆ. ಇನ್ನೊಂದೆಡೆ ಬಿಜೆಪಿಯ ಸ್ಥಳೀಯ ನಾಯಕರು ಹಾಲಿ ಸಂಸದೆ ಸುಮಲತಾ ಅಂಬರೀಶ್ ಎನ್‌ಡಿಎಗೆ ಬೆಂಬಲ ಸೂಚಿಸಿರುವ ಕಾರಣ ಅವರಿಗೆ ಟಿಕೆಟ್ ನೀಡಿ ಎಂದು ಪಟ್ಟು ಹಿಡಿದಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ನೀವೇ ಕಣಕ್ಕಿಳಿಯಿರಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಜೆಪಿ ವರಿಷ್ಠ ಅಮಿತ್ ಶಾ ಸಲಹೆ ನೀಡಿದ್ದಾರೆ. ಮತ್ತೊಂದೆಡೆ ಹೆಚ್‌ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಬಹುದು ಎಂಬ ಮಾತುಗಳೂ ಕೇಳಿ ಬರುತ್ತಿವೆ. ಒಂದು ವೇಳೆ ಇವರಿಬ್ಬರೂ ಸ್ಪರ್ಧೆಯಿಂದ ಹಿಂದೆ ಸರಿದರೆ, ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಕಣಕ್ಕಿಳಿಯುವ ಸಾಧ್ಯತೆ ಇದೆ.

ಸ್ಟಾರ್ ಚಂದ್ರುಗೆ ‘ಕೈ’ ಟಿಕೆಟ್
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಕಾಂಗ್ರೆಸ್ ಅತಿಯಾದ ಆತ್ಮವಿಶ್ವಾಸದಲ್ಲಿ ಇದೆ. ನಾವೇ ಗೆಲ್ಲೋದು ಗ್ಯಾರಂಟಿ, ನಮ್ಮ ಗ್ಯಾರಂಟಿ ಯೋಜನೆಗಳು ಕೈ ಹಿಡಿಯುತ್ತವೆ ಎಂದು ಲೆಕ್ಕಾಚಾರದಲ್ಲಿ ಇದ್ದಾರೆ. ಸದ್ಯ ಉದ್ಯಮಿ ಸ್ಟಾರ್ ಚಂದ್ರು ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ. ಗ್ಯಾರಂಟಿ ಯೋಜನೆಗಳ ಸಮಾವೇಶದ ಜೊತೆಗೆ ಮಂಡ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಪ್ರಚಾರ ಆರಂಭಿಸಿದೆ.

ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಮತ್ತೆ ಕಣಕ್ಕೆ?
ಸದ್ಯ ಮಂಡ್ಯ ಸಂಸದೆಯಾಗಿರುವುದು ಸುಮಲತಾ ಅಂಬರೀಶ್ ಕಳೆದ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿ ಅಭೂತಪೂರ್ವ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಸುಮಲತಾ ಏನು ಮಾಡ್ತಾರೆ ಎಂಬ ಪರಿಸ್ಥಿತಿ ಎದುರಾಗಿದೆ. ಸುಮಲತಾ ಅಂಬರೀಶ್ ಬಿಜೆಪಿಗೆ ಬಾಹ್ಯ ಬೆಂಬಲ ನೀಡಿದ್ದಾರೆ. ಈಗ ಸುಮಲತಾ ಅವರ ಬದ್ಧ ರಾಜಕೀಯ ವೈರಿ ಜೆಡಿಎಸ್ ಜೊತೆ ಬಿಜೆಪಿ ಮೈತ್ರಿಯಾಗಿದೆ. ಜೆಡಿಎಸ್ ನಾಯಕರು ಖಂಡಿತವಾಗಿ ಸುಮಲತಾ ಅವರನ್ನು ಅಭ್ಯರ್ಥಿಯನ್ನಾಗಿ ಒಪ್ಪಿಕೊಳ್ಳಲ್ಲ. ಈ ಸನ್ನಿವೇಶದಲ್ಲಿ ಸುಮಲತಾ ಅವರು ಕಾದುನೋಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ. ಬಿಜೆಪಿ ಧೋರಣೆ ಮೇಲೆ ಸುಮಲತಾ ಅವರ ನಿರ್ಧಾರ ನಿಂತಿದೆ. ಮೈತ್ರಿ ಟಿಕೆಟ್ ಜೆಡಿಎಸ್ ಎಂಬುದು ನಿಚ್ಚಳವಾದಂತಿದೆ. ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿ ಬೇರೆ ಕ್ಷೇತ್ರದಲ್ಲಿ ಟಿಕೆಟ್ ಕೊಡುತ್ತಾ ಅಥವಾ ಮತ್ತೆ ಸ್ವತಂತ್ರ ಅಭ್ಯರ್ಥಿಯಾಗಿ ಸಂಸದೆ ಮಂಡ್ಯದಲ್ಲಿ ಕಣಕ್ಕಿಳಿಯುತ್ತಾರಾ ಎಂಬ ಪ್ರಶ್ನೆ ಮೂಡಿದೆ.

ಜಾತಿವಾರು ಲೆಕ್ಕಾಚಾರ:
ಒಕ್ಕಲಿಗರು – 7,89,420
ದಲಿತರು – 3,03,601
ಲಿಂಗಾಯತರು – 1,61,436
ಕುರುಬರು – 1,71,854
ವಿಶ್ವಕರ್ಮ – 31,550
ಮುಸ್ಲಿಮರು – 1,29,154
ಕ್ರೈಸ್ತರು – 26,623
ಬ್ರಾಹ್ಮಣರು – 24,915
ಬೆಸ್ತರು – 56,219
ಇತರೆ – 55,012
ಒಟ್ಟು – 17,59,175

ಮಂಡ್ಯದಿಂದ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿ?

0
0

ಮಂಡ್ಯ: ಲೋಕಸಭೆ ಚುನಾವಣೆಗೆ (Lok Sabha Election) ಮಂಡ್ಯದಿಂದ (Mandya) ಮೈತ್ರಿ ಅಭ್ಯರ್ಥಿಯಾಗಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಸ್ಪರ್ಧಿಸುವುದು ಬಹುತೇಕ ಫಿಕ್ಸ್‌ ಆಗಿದೆ.

ಸೋಮವಾರ ಬೆಂಗಳೂರಿನಲ್ಲಿ ನಡೆದ ಜೆಡಿಎಸ್ (JDS) ಕೋರ್ ಕಮಿಟಿ ಸಭೆಯಲ್ಲೂ ಕುಮಾರಸ್ವಾಮಿ ಸ್ಪರ್ಧೆಯ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡಲು ಎಲ್ಲಾ ನಾಯಕರು ಒಪ್ಪಿಗೆ ನೀಡಿದ್ದಾರೆ. ಇದನ್ನೂ ಓದಿ: 2 ಸೀಟಿಗೆ ಮೈತ್ರಿ ಬೇಕಿತ್ತಾ? – ಜೆಡಿಎಸ್‌ ಅಸಮಾಧಾನಕ್ಕೆ ಕಾರಣ ಏನು?

 

ಬಿಜೆಪಿ ಹೈಕಮಾಂಡ್‌ನಿಂದಲೂ (BJP High Command) ಕುಮಾರಸ್ವಾಮಿ ಸ್ಪರ್ಧೆಗೆ ಸಮ್ಮತಿ ಸಿಕ್ಕಿದೆ. ಹೀಗಾಗಿ ಮಾರ್ಚ್‌ 25ಕ್ಕೆ ಕುಮಾರಸ್ವಾಮಿ ಅಧಿಕೃತ ಅಭ್ಯರ್ಥಿ ಎಂದು ಘೋಷಣೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಮೇಘನಾ ಫುಡ್ಸ್ ಗ್ರೂಪ್ ಮೇಲೆ ಐಟಿ ದಾಳಿ

ಇಂದು ಕುಮಾರಸ್ವಾಮಿ ಚೆನ್ನೈಗೆ (Chennai) ತೆರಳಲಿದ್ದು ಮಾರ್ಚ್‌ 21 ರಂದು ಆಪರೇಷನ್‌ ನಡೆಯಲಿದೆ. ಆಪರೇಷನ್‌ ಮುಗಿಸಿದ ಬಳಿಕ ಮಂಡ್ಯದಲ್ಲಿ ಬೃಹತ್ ಸಭೆ ಆಯೋಜನೆಯಾಗಲಿದೆ. ಈ ಸಭೆಯ ಮೂಲಕ ಅಧಿಕೃತ ಚುನಾವಣಾ ಅಖಾಡಕ್ಕೆ ಹೆಚ್‌ಡಿಕೆ ಧುಮುಕಲಿದ್ದಾರೆ.

 

ಮಂಡ್ಯ ಲೋಕಸಭಾ ಚುನಾವಣೆ ಸಂಬಂಧ ಕಳೆದ ವಾರ ಮಂಡ್ಯದಲ್ಲಿ ನಡೆದ ಸಭೆಯಲ್ಲಿ ನೀವೇ ಕಣಕ್ಕೆ ಇಳಿಯಬೇಕು ಇಲ್ಲದಿದ್ದರೆ ನಿಖಿಲ್‌ ಕುಮಾರಸ್ವಾಮಿ ಕಣಕ್ಕೆ ಇಳಿಯಬೇಕು ಎಂದು ಕುಮಾರಸ್ವಾಮಿ ಅವರಿಗೆ ಒತ್ತಡ ಹಾಕಿದ್ದರು.


ಇಂದು ಮೇಲುಕೋಟೆಯಲ್ಲಿ ವಿಶ್ವವಿಖ್ಯಾತ ವೈರಮುಡಿ ಉತ್ಸವ

0
0

ಮಂಡ್ಯ: ಮೇಲುಕೋಟೆಯಲ್ಲಿ ವಿಶ್ವವಿಖ್ಯಾತ ವೈರಮುಡಿ ಉತ್ಸವ  (Melkote Vairamudi Utsava) ಇಂದು (ಗುರುವಾರ) ರಾತ್ರಿ ಜರುಗಲಿದ್ದು, ಚೆಲುವನಾರಾಯಣಸ್ವಾಮಿ ದೇಗುಲಕ್ಕೆ (Melkote Cheluva Narayana Swamy Temple) ಲಕ್ಷಾಂತರ ಭಕ್ತರು ಬಂದು ವೈರಮುಡಿ ಉತ್ಸವವನ್ನು ಕಣ್ತುಂಬಿಕೊಳ್ಳಲಿದ್ದಾರೆ.

ವಿಜೃಂಭಣೆಯ ಉತ್ಸವಕ್ಕೆ ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮೇಲುಕೋಟೆ ಸಜ್ಜಾಗಿದ್ದು. ರಾತ್ರಿ 8:30ಕ್ಕೆ ಸಲ್ಲುವ ಆಶ್ಲೇಷ ನಕ್ಷತ್ರದಲ್ಲಿ ವೈರಮುಡಿ ಉತ್ಸವಕ್ಕೆ ಚಾಲನೆ ಸಿಗಲಿದೆ. ವೈರಮುಡಿ ಉತ್ಸವ ನೋಡಲು 2 ಲಕ್ಷ ಭಕ್ತರು ಸೇರುವ ನಿರೀಕ್ಷೆ ಇದೆ. ಈಗಾಗಲೇ ತಮಿಳುನಾಡು, ಕೇರಳ ಸೇರಿದಂತೆ ಹೊರ ರಾಜ್ಯಗಳಿಂದ ಭಕ್ತರು ಆಗಮಿಸಿದ್ದಾರೆ. ವೈಭವಯುತ ಉತ್ಸವಕ್ಕಾಗಿ ಮಂಡ್ಯ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಇದನ್ನೂ ಓದಿ: ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಬಚ್ಚೇಗೌಡ ರಾಜೀನಾಮೆ

ಬೆಳಗ್ಗೆ 7:30ಕ್ಕೆ ಜಿಲ್ಲಾ ಖಜಾನೆಯಿಂದ ವಜ್ರಖಚಿತ ವೈರಮುಡಿ ಆಭರಣಗಳನ್ನು ಬಿಗಿ ಭದ್ರತೆಯಲ್ಲಿ ಮಂಡ್ಯದಿಂದ ಮೇಲುಕೋಟೆಗೆ ತರಲಾಗಿದೆ. ಡಿಸಿ, ಎಸ್ಪಿ ನೇತೃತ್ವದಲ್ಲಿ ಆಭರಣಗಳ ಪರಿಶೀಲನೆ ಬಳಿಕ ಖಜಾನೆಯಿಂದ ವೈರಮುಡಿ ಆಭರಣ ತರಲಾಗಿದ್ದು, ಈಗಾಗಲೇ ಲಕ್ಷ್ಮಿ ಜನಾರ್ದನ ಸ್ವಾಮಿ ದೇವಾಲಯದಲ್ಲಿ ವೈರಮುಡಿ ಕೀರಿಟಕ್ಕೆ ಮೊದಲ ಪೂಜೆ ಸಲ್ಲಿಕೆಯಾಗಿದೆ.

ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ವೈರಮುಡಿ ಆಭರಣ ಇರುವ ವಾಹನ ಹಾದು ಹೋಗಲಿದ್ದು, ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯನಕೊಪ್ಪಲು, ಪಾಂಡವಪುರ, ಜಕ್ಕನಹಳ್ಳಿ ಮಾರ್ಗವಾಗಿ ಮೇಲುಕೋಟೆಗೆ ಆಭರಣದ ವಾಹನ ತಲುಪಲಿದೆ. ಮಾರ್ಗದುದ್ದಕ್ಕೂ ಸಿಗುವ ಗ್ರಾಮಗಳಲ್ಲಿ ವೈರಮುಡಿ ಕಿರೀಟದ ಪೂಜೆ ನಡೆಯಲಿದೆ. ಸಂಜೆ 6 ವೇಳೆಗೆ ಮೇಲುಕೋಟೆಗೆ ವೈರಮುಡಿ ಕಿರೀಟ ಹಾಗೂ ಆಭರಣ ತಲುಪಲಿದೆ.

ಬಳಿಕ ಶ್ರೀ ಚೆಲುವನಾರಾಯಣಸ್ವಾಮಿಯ ಉತ್ಸವ ಮೂರ್ತಿಗೆ ಕಿರೀಟ ಧಾರಣೆ ಮಾಡಿ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ನಂತರ ಮೇಲುಕೋಟೆಯ ಪ್ರಮುಖ ಬೀದಿಗಳಲ್ಲಿ ವೈರಮುಡಿ ಉತ್ಸವ ನಡೆಯಲಿದೆ. ಬಣ್ಣಬಣ್ಣದ ವಿದ್ಯುತ್ ದೀಪಾಲಂಕಾರಗಳಿಂದ ಇಂದು ಸಂಜೆ ಮೇಲುಕೋಟೆ ಕಂಗೊಳಿಸಲಿದೆ. ಇದನ್ನೂ ಓದಿ: 5,8,9 ತರಗತಿಗೆ ಪರೀಕ್ಷೆ ಯಾವಾಗ? – ಗೊಂದಲದಲ್ಲಿ ವಿದ್ಯಾರ್ಥಿಗಳು, ಪೋಷಕರು

ಮಂಡ್ಯ ಕದನ ರಣಕಣ –ನಿಖಿಲ್ ಅಥವಾ ಹೆಚ್‌ಡಿಕೆ, ಇಬ್ಬರಲ್ಲಿ ಒಬ್ಬರ ಸ್ಪರ್ಧೆ ಫಿಕ್ಸ್!

0
0

-ಇಂದೇ ಮಂಡ್ಯದ ಜೆಡಿಎಸ್ ಅಭ್ಯರ್ಥಿ ಹೆಸರು ಘೋಷಣೆ ಸಾಧ್ಯತೆ

ಮಂಡ್ಯ: ಸಕ್ಕರೆ ನಾಡು ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಅಧಿಕೃತವಾಗಿ ಜೆಡಿಎಸ್‌ಗೆ ಬಿಟ್ಟು ಕೊಟ್ಟಿದೆ. ಇದೀಗ ಜೆಡಿಎಸ್‌ನಿಂದ ಮೈತ್ರಿ ಅಭ್ಯರ್ಥಿಯಾಗಿ ಹೆಚ್.ಡಿ ಕುಮಾರಸ್ವಾಮಿ ಅಥವಾ ನಿಖಿಲ್ ಕುಮಾರಸ್ವಾಮಿ ಇಬ್ಬರಲ್ಲಿ ಯಾರು ಸ್ಪರ್ಧೆ ಮಾಡ್ತಾರೆ ಅನ್ನೋ ಕುತೂಹಲಕ್ಕೆ ಇಂದೇ ತೆರೆ ಬೀಳುವ ಸಾಧ್ಯತೆ ಇದೆ.

ಇಷ್ಟು ದಿನಗಳ ಕಾಲ ಜೆಡಿಎಸ್ ನಾಯಕರು ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ ನಮಗೆ ಬೇಕು ಎಂದು ಒತ್ತಾಯಿಸುತ್ತಿದ್ದರು. ಮತ್ತೊಂದು ಕಡೆ ಹಾಲಿ ಸಂಸದೆ ಸುಮಲತಾ ಅಂಬರೀಶ್ ನನಗೆ ಸಿಗುತ್ತೆ ಎಂಬ ವಿಶ್ವಾಸದಲ್ಲಿದ್ದರು. ಇದೀಗ ಅಂತಿಮವಾಗಿ ಬಿಜೆಪಿ ಜೆಡಿಎಸ್‌ಗೆ ಮಂಡ್ಯವನ್ನು ಬಿಟ್ಟು ಕೊಟ್ಟಿರೋದಾಗಿ ಅಧಿಕೃತ ಆದೇಶ ಮಾಡಿದೆ. ಇದೀಗ ಜೆಡಿಎಸ್‌ನಿಂದ ಮೈತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗಳು ಎದ್ದಿವೆ. ಇದನ್ನೂ ಓದಿ: ವಾಣಿಜ್ಯೋದ್ಯಮಿ ಪಲ್ಲವಿ ಡೆಂಪೊಗೆ ಟಿಕೆಟ್‌ – ಗೋವಾ ಇತಿಹಾಸದಲ್ಲೇ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಮೊದಲ ಮಹಿಳೆ

ಮಂಡ್ಯ ಜಿಲ್ಲೆಯ ಎಲ್ಲಾ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ಕುಮಾರಸ್ವಾಮಿ ಅಥವಾ ನಿಖಿಲ್ ಇಬ್ಬರಲ್ಲಿ ಒಬ್ಬರು ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕು ಅಂತ ಒತ್ತಾಯಿಸುತ್ತಿದ್ದರು. ಇದಕ್ಕೆ ಕುಮಾರಸ್ವಾಮಿ ಅವರೂ ಮಾರ್ಚ್ 25ಕ್ಕೆ ಘೋಷಣೆ ಮಾಡುವುದಾಗಿ ತಿಳಿಸಿದ್ದರು. ಮಂಡ್ಯ ಜಿಲ್ಲೆಯ ನಾಯಕರ ಹಾಗೂ ಕಾರ್ಯಕರ್ತರ ಆಗ್ರಹಕ್ಕೆ ಮಣಿದು ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧೆಗೆ ಒಪ್ಪಿದ್ರು. ಆದ್ರೆ ಇದೀಗ ಚನ್ನಪಟ್ಟಣದ ಜೆಡಿಎಸ್ ಕಾರ್ಯಕರ್ತರು ಕುಮಾರಸ್ವಾಮಿ ಅವರು ರಾಮನಗರ ಬಿಟ್ಟು ಹೋಗಬಾರದು. ನಿಖಿಲ್ ಅವರು ಮಂಡ್ಯದಿಂದ ಸ್ಪರ್ಧೆ ಮಾಡಲಿ ಎಂದು ಒತ್ತಾಯ ಮಾಡಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಹಾಗೂ ನಿಖಿಲ್ ಇಬ್ಬರಲ್ಲಿ ಯಾರು ಅಭ್ಯರ್ಥಿ ಆಗುತ್ತಾರೆ ಎಂಬ ಗೊಂದಲ ಉಂಟಾಗಿದ್ದು, ಇಂದೇ ತೆರೆ ಬೀಳುವ ಸಾಧ್ಯತೆಗಳಿವೆ.

ಭಾನುವಾರ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಬೆಂಗಳೂರಿನಲ್ಲಿರುವ ಕುಮಾರಸ್ವಾಮಿ ಅವರ ನಿವಾಸಕ್ಕೆ ತೆರಳಿ ಮತ್ತೆ ನೀವು ಅಥವಾ ನಿಖಿಲ್ ಇಬ್ಬರಲ್ಲಿ ಒಬ್ಬರು ಬರಲೇ ಬೇಕೆಂದು ಕುಮಾರಸ್ವಾಮಿ ಅವರಿಗೆ ದುಂಬಾಲು ಬಿದ್ದಿದ್ದರು. ಇದಕ್ಕೆ ಕುಮಾರಸ್ವಾಮಿ ಅವರು ಮಂಡ್ಯ ಕಾರ್ಯಕರ್ತರ ಆಸೆ ನಿರಾಸೆ ಮಾಡಲ್ಲ ಚನ್ನಪಟ್ಟಣ ಕಾರ್ಯಕರ್ತರನ್ನು ಕರೆದು ಮಾತಾಡುತ್ತೇನೆ ಎಂದು ಹೇಳಿದ್ದರು. ಇದನ್ನೂ ಓದಿ: ರಾಜ್ಯ ಸರ್ಕಾರ ಸುಳ್ಳು ಹೇಳ್ತಿದೆ, ಬರ ಪರಿಹಾರವನ್ನ ನ್ಯಾಯಾಲಯವೇ ತೀರ್ಮಾನಿಸಲಿ: ನಿರ್ಮಲಾ ಸೀತಾರಾಮನ್

ದಳಪತಿ ಲೆಕ್ಕಾಚಾರ ಏನು?
* ಮಂಡ್ಯ ಜಿಲ್ಲೆಯಲ್ಲಿ ಕುಮಾರಸ್ವಾಮಿ ನಿಂತ್ರೆ ಗೆಲುವು ಸುಲಭ ಅನ್ನುವ ಲೆಕ್ಕಾಚಾರ.
* 1 ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್ ಶಾಸಕರು ಇದ್ದಾರೆ. ಉಳಿದ ಕಡೆ ಕಾಂಗ್ರೆಸ್ ಶಾಸಕರು ಇದ್ದಾರೆ. ಶಾಸಕರ ಪ್ರಭಾವ ಮೀರಿ ಗೆಲ್ಲುವ ಸಾಮರ್ಥ್ಯ ಕುಮಾರಸ್ವಾಮಿ ಇದೆ ಎಂಬ ಲೆಕ್ಕಾಚಾರ.
* 2019ರ ಚುನಾವಣೆಯಲ್ಲಿ ಪುತ್ರನ ಸೋಲು ಮತ್ತು ಕಳೆದ ವಿಧಾನಸಭೆಯಲ್ಲಿ ಜೆಡಿಎಸ್ ಸೋಲಿನ ಅನುಕಂಪ ಕುಮಾರಸ್ವಾಮಿ ಮೇಲೆ ಇದೆ. ಇದು ಚುನಾವಣೆಯಲ್ಲಿ ವರ್ಕ್ ಆಗುವ ಲೆಕ್ಕಾಚಾರ.
* ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡಿದ್ರೆ ಹಳೇ ಮೈಸೂರು ಭಾಗದ ಹಲವು ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ ಪ್ಲಸ್ ಪಾಯಿಂಟ್‌ ಆಗೋ ತಂತ್ರಗಾರಿಕೆ.
* ಬಿಜೆಪಿಯ ಹೈಕಮಾಂಡ್ ಮತ್ತು ಜೆಡಿಎಸ್ ನಡೆಸಿರೋ ಸರ್ವೆಗಳಲ್ಲಿ ಕುಮಾರಸ್ವಾಮಿ ನಿಂತರೆ ಗೆಲುವು ಸುಲಭ ಅನ್ನೋ ರಿಪೋರ್ಟ್.
* ಮಂಡ್ಯದಲ್ಲಿ ಕಾಂಗ್ರೆಸ್ ಕಟ್ಟಿ ಹಾಕಬೇಕಾದ್ರೆ ಕುಮಾರಸ್ವಾಮಿ ಪ್ರಬಲ ಅಭ್ಯರ್ಥಿ ಅನ್ನುವ ಲೆಕ್ಕಾಚಾರ.

ಇಂದು ಮಂಡ್ಯ‌ ಮೈತ್ರಿ ಅಭ್ಯರ್ಥಿ ಘೋಷಣೆ –ಸಕ್ಕರೆ ನಾಡಿನಿಂದ ಹೆಚ್‌ಡಿಕೆ ಸ್ಪರ್ಧೆ ಫಿಕ್ಸ್?

0
0

ಮಂಡ್ಯ: ಸಕ್ಕರೆ ನಾಡು ಮಂಡ್ಯ (Mandya) ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ. ಮಂಡ್ಯ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಯಾರು ಸ್ಪರ್ಧೆ ಮಾಡ್ತಾರೆ ಎಂವ ಕೌತುಕ ರಾಜಕೀಯ ವಲಯದಲ್ಲಿ ಮೂಡಿತ್ತು. ಇಂದು (ಮಂಗಳವಾರ) ಈ ಎಲ್ಲಾ ಕುತೂಹಲಕ್ಕೂ ತೆರೆ ಬೀಳಲಿದೆ.

ಇಷ್ಟು ದಿನಗಳ ಕಾಲ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ (H.D.Kumaraswamy) ಆಗ್ತಾರಾ ಅಥವಾ ನಿಖಿಲ್ ಕುಮಾರಸ್ವಾಮಿ ಆಗುತ್ತಾರಾ ಎಂಬ ಪ್ರಶ್ನೆಗಳು ಎದ್ದಿದ್ದವು. ಇದೀಗ ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರೇ ಕಣಕ್ಕೆ ಇಳಿಯಲಿದ್ದಾರೆ. ಇದನ್ನೂ ಓದಿ: ನಾನು ಈಗ ಮಧುಮಗ ಇದ್ದಂತೆ, ಕಾರ್ಯಕರ್ತರು ನನ್ನ ಪೋಷಕರು: ಬಿಎನ್ ಚಂದ್ರಪ್ಪ

ಮಂಡ್ಯ ಜಿಲ್ಲೆಯ ಜೆಡಿಎಸ್‌ ನಾಯಕರು ಹಾಗೂ ಕಾರ್ಯಕರ್ತರು ಒತ್ತಡ ಏರಿದಾಗಲೇ ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧೆ ಮಾಡುವ ಮನಸ್ಸು ಮಾಡಿದ್ರು. ಆದರೆ ರಾಮನಗರ ಜಿಲ್ಲೆಯ ಮುಖಂಡರು‌ ಹಾಗೂ ಕಾರ್ಯಕರ್ತರು ಮಂಡ್ಯ ಸ್ಪರ್ಧೆ ಬೇಡಾ. ರಾಮನಗರದಲ್ಲಿಯೇ ಕುಮಾರಸ್ವಾಮಿ ಇರಬೇಕು. ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡುವಂತೆ ಹೇಳಿದ್ರು. ಹೀಗಾಗಿ ಕುಮಾರಸ್ವಾಮಿ ಅವರು ಮಂಡ್ಯ ಸ್ಪರ್ಧೆ ವಿಚಾರದಲ್ಲಿ ಸ್ವಲ್ಪ ಗೊಂದಲದಲ್ಲಿ‌ ಇದ್ದರು.

ನಿನ್ನೆ ರಾಮನಗರ ಜಿಲ್ಲೆಯ ಮುಖಂಡರು ಹಾಗೂ ಕಾರ್ಯಕರ್ತರನ್ನು ಬೆಂಗಳೂರಿನ ತಮ್ಮ ನಿವಾಸಕ್ಕೆ ಕರೆದು ಕುಮಾರಸ್ವಾಮಿ ಮಾತನಾಡಿದ್ದಾರೆ. ಈ ವೇಳೆ ಮಂಡ್ಯದಲ್ಲಿ ಸ್ಪರ್ಧೆ ಮಾಡುವ ಅನಿವಾರ್ಯತೆ ಬಗ್ಗೆ ಕಾರ್ಯಕರ್ತರಿಗೆ ಹೆಚ್‌ಡಿಕೆ ತಿಳಿಸಿದ್ದಾರೆ. ಬಳಿಕ ರಾಮನಗರ ಜಿಲ್ಲೆಯ ಜನರು ಮಂಡ್ಯದಲ್ಲಿ ಕುಮಾರಸ್ವಾಮಿ ಅವರ ಸ್ಪರ್ಧೆಗೆ ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಮಂಡ್ಯದಿಂದ ಕುಮಾರಸ್ವಾಮಿ ಅವರ ಸ್ಪರ್ಧೆ ಪಕ್ಕ ಆಗಿದೆ. ಇದನ್ನೂ ಓದಿ: ದೋಸ್ತಿ ಪಕ್ಷದ ಪವರ್‌ ಸೆಂಟರ್‌ ಆಗಿ ಬದಲಾಯ್ತು ಹೆಚ್‌ಡಿಕೆ ನಿವಾಸ!

ಹೆಚ್‌ಡಿಕೆ ಮಂಡ್ಯದಿಂದ ಸ್ಪರ್ಧೆ ಮಾಡೋದು ಕನ್ಫರ್ಮ್‌ ಆಗಿದ್ದು, ಇಂದು ಅಧಿಕೃತವಾಗಿ ಘೋಷಣೆಯಾಗಲಿದೆ. ಇದೀಗ ಕುಮಾರಸ್ವಾಮಿ ಸ್ಪರ್ಧೆಯ ವಿರುದ್ಧ ಕಾಂಗ್ರೆಸ್ ಯಾವ ದಾಳ ಉರುಳಿಸುತ್ತೆ ಎನ್ನುವುದು ಕುತೂಹಲ.

ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ –ಅಧಿಕೃತ ಘೋಷಣೆ ಮಾತ್ರ ಬಾಕಿ

0
0

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ (Mandya Lok Sabha Election) ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಸ್ಪರ್ಧೆ ಮಾಡುವುದು ಬಹುತೇಕ ಅಂತಿಮವಾಗಿದ್ದು ಅಧಿಕೃತ ಘೋಷಣೆ ಬಾಕಿಯಿದೆ.

ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ ಇಂದು ಸಂಜೆ ಮಂಡ್ಯ ಭಾಗದ ಜೆಡಿಎಸ್‌ (JDS) ನಾಯಕರ ಸಭೆಯನ್ನು ಕರೆಯುತ್ತೇನೆ. ಈ ಸಭೆಯ ಬಳಿಕ ಅಂತಿಮವಾಗಿ ಅಭ್ಯರ್ಥಿಯ ಹೆಸರನ್ನು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

 

ಜೆಡಿಎಸ್‌ನ ಹೃದಯ ಭಾಗ ಮಂಡ್ಯ. ಕಳೆದ ಚುನಾವಣೆ ನಮಗೆ ನೈತಿಕ ಸೋಲು ಅಲ್ಲ. ಈ ಚುನಾವಣೆ ಮೂಲಕ ಜೆಡಿಎಸ್ ಮುಗಿಸುತ್ತೇವೆ ಎನ್ನುವ ದುರಹಂಕಾರದ ಮಾತಿಗೆ ಚುನಾವಣೆಯಲ್ಲಿ ಉತ್ತರ ಕೊಡುತ್ತೇವೆ ಎಂದರು. ಇದನ್ನೂ ಓದಿ: ನಮ್ಮ ವರಿಷ್ಠರು ಸಂಸದೆ ಸುಮಲತಾರ ಮೇಲೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ: ವಿಜಯೇಂದ್ರ

ಬದುಕಿರುವರೆಗೂ ನಾವು ರಾಮನಗರ ಜಿಲ್ಲೆಯ ಅಭಿವೃದ್ಧಿ ಕೈ ಬಿಡುವುದಿಲ್ಲ. ರಾಮನಗರ, ಚನ್ನಪಟ್ಟಣ ಜನತೆಗೆ ಮನವಿ ಮಾಡುತ್ತೇನೆ. ಈ ಪಕ್ಷ ಉಳಿಸಲು 3 ಬಾರಿ ಹೃದಯ ಚಿಕಿತ್ಸೆ, ಎರಡು ಬಾರಿ ಮೆದುಳು ಚಿಕಿತ್ಸೆ ನಡೆದಿದೆ. ಇಷ್ಟು ಆದರೂ ಬದುಕಿದರೆ ನಾಡಿಗೆ ಏನೋ ಸೇವೆ ಬೇಕು ಅಂತ ದೇವರು ಬದುಕಿಸಿದ್ದಾನೆ. ಈ ಪಕ್ಷ ಉಳಿಸೋದು ನಿಮ್ಮ ಕೈಯಲ್ಲಿ ಇದೆ. ಇದು ರೈತರ ಪಕ್ಷ ಎಂದು ಹೇಳಿದರು.

 

ಬಿಜೆಪಿಯವರು ಮೂರು ಕ್ಷೇತ್ರಗಳನ್ನು ನಮಗೆ ಬಿಟ್ಟು ಕೊಟ್ಟಿದ್ದಾರೆ. ಹಾಸನ ಅಭ್ಯರ್ಥಿಯ ಬಗ್ಗೆ ನಮ್ಮ ವರಿಷ್ಠರಾದ ದೇವೇಗೌಡರು ತೀರ್ಮಾನ ತೆಗೆದುಕೊಂಡಿದ್ದಾರೆ. ಕೋಲಾರದಲ್ಲಿ ಮೂವರ ಹೆಸರು ಇದೆ. ಇದರ ಜೊತೆ ಬಿಜೆಪಿಯ ಹಾಲಿ ಸಂಸದ ಮುನಿಸ್ವಾಮಿ ಅವರು ಕೆಲವರ ಬಗ್ಗೆ ಹೇಳಿದ್ದಾರೆ. ಹೀಗಾಗಿ ಪಕ್ಷದ ಸಭೆ ನಡೆಸಿ ಹೆಸರನ್ನು ಅಂತಿಮಗೊಳಿಸುತ್ತೇವೆ ಎಂದು ತಿಳಿಸಿದರು.  ಇದನ್ನೂ ಓದಿ: ಆರ್‌ಸಿಬಿ ಪಂದ್ಯ ಗೆದ್ದ ಖುಷಿಯಲ್ಲಿ ಫ್ಯಾಮಿಲಿಗೆ ವೀಡಿಯೋ ಕರೆ ಮಾಡಿ ಕೊಹ್ಲಿ ಮಾತು

ಹೆಚ್‌ಡಿ ಕುಮಾರಸ್ವಾಮಿ ಲೋಕಸಭಾ ಕಣಕ್ಕೆ ಇಳಿಯುವುದು ಹೊಸದೆನಲ್ಲ ಈ ಹಿಂದೆ 1996ರಲ್ಲಿ ಕನಕಪುರದಿಂದ ಆಯ್ಕೆ ಆಗಿದ್ದರು. 2009ರಲ್ಲಿ ಬೆಂಗಳೂರು ಗ್ರಾಮಾಂತರದಿಂದ ಜಯಗಳಿಸಿದ್ದರು. 2014ರ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಿ ಸೋತಿದ್ದರು.

 

ಮುತ್ತತ್ತಿಯಲ್ಲಿ ಮೈಸೂರಿನ ನಾಲ್ವರು ಜಲಸಮಾಧಿ

0
0

ಮಂಡ್ಯ: ಮುತ್ತತ್ತಿಗೆ (Muthathi) ಪ್ರವಾಸ ಬಂದಿದ್ದ ಮೈಸೂರಿನ (Mysuru) ನಾಲ್ವರು ಕಾವೇರಿ ನದಿಯಲ್ಲಿ (Cauvery River) ಈಜಲು ಹೋಗಿ ಜಲಸಮಾಧಿಯಾಗಿದ್ದಾರೆ.

ದುರಂತದಲ್ಲಿ ತಂದೆ ನಾಗೇಶ್(40), ಮಗ ಭರತ್(17) ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಇಬ್ಬರ ಮೃತದೇಹ ಪತ್ತೆ, ಮತ್ತಿಬ್ಬರ ಶವಕ್ಕಾಗಿ ಹುಡುಕಾಟ ನಡೆಯುತ್ತಿದ್ದು ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಪಾಲಿಕೆ ಮೇಯರ್ ಚುನಾವಣೆಗೆ ಬಳ್ಳಾರಿಯಲ್ಲಿ ಚಿನ್ನ, ಬೆಳ್ಳಿ ಗಿಫ್ಟ್ ಪಾಲಿಟಿಕ್ಸ್

ಮೈಸೂರಿನ ಕನಕಗಿರಿಯಿಂದ ಮಳವಳ್ಳಿ ತಾಲೂಕಿನ ಮುತ್ತತ್ತಿಗೆ ಒಂದೇ ಬಸ್‌ನಲ್ಲಿ ಕುಟುಂಬಸ್ಥರು ಮತ್ತು ಸ್ನೇಹಿತರು ಸೇರಿ 40 ಮಂದಿ ಪ್ರವಾಸ ಬಂದಿದ್ದರು. ನದಿಯಲ್ಲಿ ಈಜಲು ತೆರಳಿದ್ದಾಗ ಈ ದುರಂತ ಸಂಭವಿಸಿದೆ. ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ ಅಂತಿಮವಾಗಿದೆ –ನಿಖಿಲ್ ಕುಮಾರಸ್ವಾಮಿ

0
0

– ವರಿಷ್ಠರು ಅಧಿಕೃತ ಹೆಸರು ಘೋಷಣೆ ಮಾಡ್ತಾರೆ ಎಂದ ಪುತ್ರ

ಬೆಂಗಳೂರು: ಮಂಡ್ಯದಿಂದ ಕುಮಾರಸ್ವಾಮಿ ಅವರ ಸ್ಪರ್ಧೆ ಅಂತಿಮವಾಗಿದೆ. ಪಕ್ಷದ ವರಿಷ್ಠರೇ ಅಧಿಕೃತವಾಗಿ ಹೆಸರು ಘೋಷಣೆ ಮಾಡ್ತಾರೆ ಅಂತ ಕುಮಾರಸ್ವಾಮಿ ಪುತ್ರ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸ್ಪಷ್ಟಪಡಿಸಿದ್ದಾರೆ.

ಇಲ್ಲಿನ ಜೆಪಿ ನಗರ ನಿವಾಸದ ಬಳಿ ಮಾತನಾಡಿದ ಅವರು, ಕೋರ್ ಕಮಿಟಿ ಸಭೆಯಲ್ಲಿ ಮಂಡ್ಯ, ಕೋಲಾರ ಕ್ಷೇತ್ರಗಳ ಬಗ್ಗೆ ಚರ್ಚೆ ಆಗಿದೆ. ಮಂಡ್ಯಕ್ಕೆ ಕುಮಾರಸ್ವಾಮಿ ಅವರ ಹೆಸರೇ ಅಧಿಕೃತ ಆಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಾಮರಾಜನಗರದಿಂದ ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್‌ಗೆ ಟಿಕೆಟ್‌; ಅಧಿಕೃತ ಘೋಷಣೆ

ಮಂಡ್ಯದ ಜೆಡಿಎಸ್‌ ಕಾರ್ಯಕರ್ತರ, ನಾಯಕರ ಒತ್ತಾಸೆಗೆ ಬೆಲೆ ಕೊಟ್ಟು ಕುಮಾರಸ್ವಾಮಿ ಸ್ಪರ್ಧೆ ಮಾಡ್ತಿದ್ದಾರೆ. ಮಂಡ್ಯ ಜಿಲ್ಲೆಗೆ ಆದ ಅನ್ಯಾಯ ಸರಿಪಡಿಸಬೇಕು. ಕುಮಾರಸ್ವಾಮಿ ಅವರಿಗೆ ರಾಜ್ಯದ ಪರವಾಗಿ ಬದ್ದತೆ ಇದೆ. ರಾಜ್ಯದ ಪರವಾಗಿ ಕೆಲಸ ಮಾಡ್ತಾರೆ ಅಂತ ಬಿಜೆಪಿ ಹೈಕಮಾಂಡ್ ನಾಯಕರಿಗೂ ಅನ್ನಿಸಿದೆ. ಅಧಿಕೃತವಾಗಿ ಕುಮಾರಸ್ವಾಮಿ ಅವರು ಅಭ್ಯರ್ಥಿ ಆಗೋ ಬಗ್ಗೆ ವರಿಷ್ಠರು ಅಧಿಕೃತ ಘೋಷಣೆ ಮಾಡ್ತಾರೆ ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕೇಸ್ – ಬೆಂಗ್ಳೂರು, ಶಿವಮೊಗ್ಗ, ಹುಬ್ಬಳಿಯಲ್ಲಿ ಬೆಳ್ಳಂಬೆಳಗ್ಗೆ ಎನ್‌ಐಎ ದಾಳಿ

ಕೋಲಾರ ಅಭ್ಯರ್ಥಿ ವಿಚಾರವಾಗಿ, ಈಗಾಗಲೇ ದೇವೇಗೌಡರು ಅಭ್ಯರ್ಥಿ ಘೋಷಣೆ ಮಾಡಿದ್ದಾರೆ. ದೇವೇಗೌಡರ ನಿರ್ಧಾರವೇ ಅಂತಿಮ. ದೇವೇಗೌಡರು ಎಲ್ಲಾ ನಾಯಕರ ಭಾವನೆ ತಿಳಿದುಕೊಂಡು ನಿರ್ಧಾರ ಘೋಷಣೆ ಮಾಡಿರುತ್ತಾರೆ. ಮಲ್ಲೇಶ್ ಬಾಬು ಅವರ ಹೆಸರು ಘೋಷಣೆ ಮಾಡಿದ್ದಾರೆ. ಮಲ್ಲೇಶ್ ಬಾಬು ಮೃದು ಸ್ವಾಭಾವದ ವ್ಯಕ್ತಿ. ಪಕ್ಷಕ್ಕೆ ನಿಷ್ಠೆ ಇರುವ ವ್ಯಕ್ತಿ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತಿದ್ದರು. ಮಲ್ಲೇಶ್ ಬಾಬು ಜೊತೆಗೆ ನಿಸರ್ಗ ನಾರಾಯಣಸ್ವಾಮಿ, ಸಂಮೃದ್ಧಿ ಮಂಜುನಾಥ್ ಕೂಡಾ ಆಕಾಂಕ್ಷಿ ಇದ್ದಾರೆ. ಕೋಲಾರದ ಮುಖಂಡರ ಸಭೆ ಮಾಡ್ತಿದ್ದೇನೆ. ಅಲ್ಲಿ ಚರ್ಚೆ ಮಾಡಿ ಇಂದೇ ಅಂತಿಮ ತೀರ್ಮಾನ ಮಾಡ್ತೀವಿ ಅಂತ ತಿಳಿಸಿದ್ದಾರೆ.

ಸುಮಲತಾ ಅಂಬರೀಶ್‌ ಜೊತೆ ಮಾತುಕತೆಗೆ ನಾವು ಸಿದ್ಧ –ನಿಖಿಲ್

0
0

ಬೆಂಗಳೂರು: ಅಗತ್ಯ ಬಿದ್ದರೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರೊಂದಿಗೆ ಮಾತುಕತೆ ನಡೆಸಲು ನಾವು ಸಿದ್ಧರಿದ್ದೇವೆ ಅಂತ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತಿಳಿಸಿದ್ದಾರೆ.

ಮಾಜಿ ಸಚಿವ ನಾರಾಯಣಗೌಡರ ಮನವೊಲಿಕೆಯಂತೆ ಸುಮಲತಾ (Sumalatha Ambareesh) ಅವರ ಮನವೊಲಿಕೆ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಶ್ವಥ್ ನಾರಾಯಣ್‌ ಮತ್ತು ಪುಟ್ಟರಾಜು ಅವರ ಸಮ್ಮುಖದಲ್ಲಿ ಕುಮಾರಸ್ವಾಮಿ ಅವರು ನಾರಾಯಣಗೌಡ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನಾರಾಯಣಗೌಡರು (Narayanagowda) ನಮ್ಮ ‌ಪಕ್ಷದಿಂದಲೇ ಶಾಸಕ ಆಗಿದ್ದರು. ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳು ಇರೋದು ಸಹಜ. ಈಗ ಎಲ್ಲವೂ ಸರಿ ಆಗಿದೆ. ವೈಯಕ್ತಿಕವಾಗಿ ಕುಮಾರಸ್ವಾಮಿ ಮೇಲೆ ನಾರಾಯಣಗೌಡರು ಗೌರವ ಇಟ್ಟುಕೊಂಡಿದ್ದಾರೆ. ಕುಮಾರಸ್ವಾಮಿ ಪರ ಕೆಲಸ ಮಾಡೋದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ನಾವು ಸುಮಲತಾ ಅವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡ್ತೀವಿ. ಅಗತ್ಯ ಬಿದ್ದರೆ ಅವರ ಜೊತೆಗೂ ಮಾತುಕತೆ ನಡೆಸುತ್ತೇವೆ. ಒಟ್ಟಾರೆ ನಮಗೆ ಆರೋಗ್ಯರ ಚುನಾವಣೆ ಆಗಬೇಕು‌ ಎನ್ನುವ ಮೂಲಕ ಸುಮಲತಾ ಜೊತೆ ಮಾತುಕತೆಗೂ ಸಿದ್ಧ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಾಮರಾಜನಗರದಿಂದ ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್‌ಗೆ ಟಿಕೆಟ್‌; ಅಧಿಕೃತ ಘೋಷಣೆ

ಕುಮಾರಸ್ವಾಮಿ ಹೆಸರು ಫೈನಲ್‌:
ಇದೇ ವೇಳೆ ಮಂಡ್ಯದಲ್ಲಿ (Mandya Contestent) ಕುಮಾರಸ್ವಾಮಿ ಅವರ ಸ್ಪರ್ಧೆ ಕುರಿತು ಮಾತನಾಡಿರುವ ಅವರು, ಮಂಡ್ಯದಿಂದ ಕುಮಾರಸ್ವಾಮಿ ಅವರ ಸ್ಪರ್ಧೆ ಅಂತಿಮವಾಗಿದೆ. ಪಕ್ಷದ ವರಿಷ್ಠರೇ ಅಧಿಕೃತವಾಗಿ ಹೆಸರು ಘೋಷಣೆ ಮಾಡ್ತಾರೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕೇಸ್ – ಬೆಂಗ್ಳೂರು, ಶಿವಮೊಗ್ಗ, ಹುಬ್ಬಳಿಯಲ್ಲಿ ಬೆಳ್ಳಂಬೆಳಗ್ಗೆ ಎನ್‌ಐಎ ದಾಳಿ

ಕೋರ್ ಕಮಿಟಿ ಸಭೆಯಲ್ಲಿ ಮಂಡ್ಯ, ಕೋಲಾರ ಕ್ಷೇತ್ರಗಳ ಬಗ್ಗೆ ಚರ್ಚೆ ಆಗಿದೆ. ಮಂಡ್ಯಕ್ಕೆ ಕುಮಾರಸ್ವಾಮಿ ಅವರ ಹೆಸರೇ ಅಧಿಕೃತ ಆಗಿದೆ.ಮಂಡ್ಯ ಜಿಲ್ಲೆಯ ಪಕ್ಷದ ಕಾರ್ಯಕರ್ತರ, ನಾಯಕರ ಒತ್ತಾಸೆಗೆ ಬೆಲೆ ಕೊಟ್ಟು ಕುಮಾರಸ್ವಾಮಿ ಸ್ಪರ್ಧೆ ಮಾಡ್ತಿದ್ದಾರೆ.ಮಂಡ್ಯ ಜಿಲ್ಲೆಗೆ ಆದ ಅನ್ಯಾಯ ಸರಿಪಡಿಸಬೇಕು. ಕುಮಾರಸ್ವಾಮಿ ಅವರಿಗೆ ರಾಜ್ಯದ ಪರವಾಗಿ ಬದ್ದತೆ ಇದೆ.ರಾಜ್ಯದ ಪರವಾಗಿ ಕೆಲಸ ಮಾಡ್ತಾರೆ ಅಂತ ಬಿಜೆಪಿ ಹೈಕಮಾಂಡ್ ನಾಯಕರಿಗೂ ಅನ್ನಿಸಿದೆ.ಅಧಿಕೃತವಾಗಿ ಕುಮಾರಸ್ವಾಮಿ ಅವರು ಅಭ್ಯರ್ಥಿ ಆಗೋ ಬಗ್ಗೆ ವರಿಷ್ಠರು ಅಧಿಕೃತ ಘೋಷಣೆ ಮಾಡ್ತಾರೆ ಎಂದು ತಿಳಿಸಿದ್ದಾರೆ.


ಇಂದು ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ

0
0

ಮಂಡ್ಯ: ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ (BJP-JDS Alliance) ಮೈತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಇಷ್ಟು ದಿನ ಇತ್ತು. ಇದೀಗ ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ (H.D.Kumaraswamy) ಎಂದು ಖಚಿತವಾಗಿದೆ. ಇದೀಗ ಬಿಜೆಪಿ-ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ಕುಮಾರಸ್ವಾಮಿ ಅವರನ್ನು ಗೆಲ್ಲಿಸಲು ರಣತಂತ್ರ ಮಾಡಲು ಮುಂದಾಗಿದ್ದಾರೆ. ಈ ರಣತಂತ್ರದ ಆರಂಭಿಕ ಭಾಗ ಎರಡು ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸುವುದಾಗಿದೆ. ಹೀಗಾಗಿ ಇಂದು ಮಂಡ್ಯದಲ್ಲಿ (Mandya) ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ ನಡೆಸಲಿದೆ.

ಈಗಾಗಲೇ ಕುಮಾರಸ್ವಾಮಿ ಹಾಗೂ ಬಿಜೆಪಿ-ಜೆಡಿಎಸ್ ನಾಯಕರು, ಮಂಡ್ಯದಲ್ಲಿ ಕೆಲ ನಾಯಕರಲ್ಲಿ ಇದ್ದ ಭಿನ್ನಮತವನ್ನು ಶಮನ ಮಾಡುವಲ್ಲಿ ಮುಂದಾಗಿದ್ದಾರೆ. ಮಾಜಿ ಸಚಿವ ನಾರಾಯಣಗೌಡ ಅವರು ಈ ಮೈತ್ರಿ ವಿರೋಧಿಸಿ ಕಾಂಗ್ರೆಸ್‌ಗೆ ಹೋಗ್ತಾರೆ ಎಂದು ಹೇಳಲಾಗಿತ್ತು. ಈ ವಿಚಾರವನ್ನು ಸ್ವತಃ ಸಚಿವ ಚಲುವರಾಯಸ್ವಾಮಿಯೇ ಖಾತ್ರಿಪಡಿಸಿದ್ದರು. ಇದೀಗ ಕುಮಾರಸ್ವಾಮಿ ಅವರೇ ನಾರಾಯಣಗೌಡ ಅವರ ಮನೆಗೆ ಹೋಗಿ ಇಷ್ಟು ದಿನ ಇದ್ದ ಭಿನ್ನಾಭಿಪ್ರಾಯವನ್ನು ಬಗೆಹರಿಸಿದ್ದಾರೆ. ಇದೀಗ ಕಾರ್ಯಕರ್ತರ ನಡುವೆ ಇರುವ ಭಿನ್ನಾಭಿಪ್ರಾಯವನ್ನು ಬಗೆಹರಿಸಲು ಇಂದು ಸಮನ್ವಯ ಸಭೆಯನ್ನು ಕರೆಯಲಾಗಿದೆ. ಈ ಸಭೆಯೂ ಮಂಡ್ಯ ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ‌ ರಾಜ್ಯಾಧ್ಯಕ್ಷ ವಿಜಯೇಂದ್ರ (B.Y.Vijayendra) ನೇತೃತ್ವದಲ್ಲಿ ನಡೆಯಲಿದ್ದು, ಜೆಡಿಎಸ್‌ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವರಾದ ಪುಟ್ಟರಾಜು, ತಮ್ಮಣ್ಣ, ಸಾ.ರಾ.ಮಹೇಶ್, ನಾರಾಯಣಗೌಡ ಸೇರಿದಂತೆ ಮಾಜಿ ಶಾಸಕರು ಹಾಗೂ ಮುಖಂಡರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಕುಮಾರಸ್ವಾಮಿ ಅವರ ಗೆಲುವಿಗೆ ಏನೆಲ್ಲಾ ಮಾಡಬೇಕು ಎಂಬುದರ ಬಗ್ಗೆ ಸುದೀರ್ಘ ಚರ್ಚೆ ನಡೆಯಲಿದ್ದು, ಆಯಾಯ ಭಾಗದ ನಾಯಕರು ಮುಖಂಡರಿಗೆ ಕೆಲ ಟಾಸ್ಕ್ ಸಹ ನೀಡಲಾಗುತ್ತದೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಮಾ.28ರಂದು ನಡೆಯಬೇಕಿದ್ದ ಮೇಯರ್ ಚುನಾವಣೆ ಮುಂದೂಡಿಕೆ

ಇಂದು ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ ಏನೋ ನಡೆಯುತ್ತೆ. ಆದರೆ ಬಿಜೆಪಿ ಬೆಂಬಲಿತ ಸಂಸದೆಯಾಗಿರುವ ಸುಮಲತಾ ಅಂಬರೀಶ್ ಏನು ಮಾಡ್ತಾರೆ ಎಂದು ಇದುವರೆಗೆ ತಿಳಿದು ಬಂದಿಲ್ಲ. ಮಂಡ್ಯವನ್ನು ಜೆಡಿಎಸ್‌‌ಗೆ ಬಿಜೆಪಿ ಬಿಟ್ಟುಕೊಟ್ಟಾಗಿನಿಂದ ಎಲ್ಲೂ ಕಾಣಿಸಿಕೊಂಡಿಲ್ಲ. ಇದೀಗ ಇಂದಿನ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆಯಲ್ಲಿ ಸುಮಲತಾ ಅವರು ಕಾಣಿಸಿಕೊಳ್ತಾರಾ? ಅಥವಾ ಸುಮಲತಾ ಅವರ ರಾಜಕೀಯ ನಡೆ ಬೇರೆಯಾಗಿ ಅವರು ಸಭೆಗೆ ಬರುವುದೇ ಇಲ್ವಾ ನೋಡಬೇಕಿದೆ.

ಒಟ್ಟಾರೆ ಮಂಡ್ಯ ಮೈತ್ರಿ ಅಭ್ಯರ್ಥಿಯಾಗಿ ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ಖಚಿತವಾಗಿದೆ.‌ ಇದೀಗ ದಳಪತಿಯ ಗೆಲುವಿಗಾಗಿ ದೋಸ್ತಿಗಳು ಕಾಂಗ್ರೆಸ್ ವಿರುದ್ಧ ಚುನಾವಣೆಯ ಹೋಂವರ್ಕ್ ಆರಂಭಿಸಿದ್ದು, ಈ ಹೋಂವರ್ಕ್‌ನ ರಣತಂತ್ರ ಎಷ್ಟರ ಮಟ್ಟಿಗೆ ವರ್ಕ್ ಆಗುತ್ತೆ ಎನ್ನೋದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಸುಧಾಕರ್‌ Vs ಮುನಿಯಪ್ಪ – ರಾಜಕೀಯ ಸಂಘರ್ಷಕ್ಕೆ ಇದೆ 25 ವರ್ಷಗಳ ಇತಿಹಾಸ





Latest Images